Monday 22 April 2013

ಮಾನಸ ಸರೋವರ !!!!

ಮಾನಸ ಸರೋವರ !!!!

 

 

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು 

ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು    

 

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ 

ಕವಿಯೊಬ್ಬ ಕನವರಿಸಿದನು ಓ ಇವಳು ಚೆಲುವೆ 

ಈವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ !

ಸ್ವರ್ಗವನೇ ಗೆಲ್ಲುವೆ!!

!!


 

ಡಾ. ಶಿವರುದ್ರಪ್ಪ

 

 

 


Wednesday 2 May 2012

ಅಣ್ಣಾ ಬಾಂಡ್ !!

ಅಣ್ಣಾ ಬಾಂಡ್= ಎರಡು tappanguchi ಹಾಡುಗಳು+ ಓಂದು ಪ್ರೇಮ ಗೀತೆ+ ನಗಿಸುವ ಸಂಭಾಷಣೆ+ ಪುನೀತ್ ರವರ ಮ್ಯಾನರಿಸಂ+ ಮಾಸ್ಸ ಅಭಿಮಾನಿಗಳಿಗೆ ಫುಲ್ ಆಕ್ಷನ್+ ರಂಗಾಯಣ ರಘು ಕಾಮಿಡಿ+ ನಿಧಿ ಸುಬ್ಬಯ್ಯ ಗ್ಲಾಮರ್+ ಅದ್ಭುತ್
ಲೋಕೆಶನಗಳು - ಒಳ್ಳೆ ಸ್ಟೋರಿ ಇಲ್ಲದ ಚಿತ್ರ .


ತುಂಬಾ ನೋಡಬೇಡಿ ಲವ್ವು  ಆಯ್ತದೆ 
ಜಾಸ್ತಿ ನೋಡಿದ್ರೆ ನಿರ್ಮಾಪಕನ ಜೇಬ ತುಮ್ಬತದೆ 
ಜಾಸ್ತಿ ಓಡಿದರೆ ಕಠಾರಿ ವೀರ ಕೋಪ ಮಾಡ್ಕೋತಾನೆ
ಹೆಚ್ಚು ಕಮ್ಮಿ ಗಾಡ್‌ಫಾದರ್ ಗನ್ನು ಹಿಡ್ಕೊತಾನೇ !
ತುಂಬಾ ನೋಡಬೇಡಿ ಲವ್ವು  ಆಯ್ತದೆ!!

Thursday 19 April 2012

ಮೊದಲ ಹನಿ !!





ಬಿಸಿ ಗಾಳಿ ಬಿಸಿ ನೀರು ಬಿಸಿ ಸುಡುತಿದೆ ದೇಹ
ಮಜ್ಜಿಗೆ ಎಲೆ ನೀರಿನ ಮೇಲೆ ಮೋಹ
ಇವು ತನಿಸುವುದೇ ನಮ್ಮ ದೇಹ
ಓಹೋ ಆಹಾ ಆಹಾಕರ ದಾಹಾಕರ

ಕಾಡು ಕಬ್ಬಿನವಾದಳು ಭೂತಾಯಿ
ಕುಲಿತಿರುವಳು ಮೂಢದೆಡೆ ಮುಖ ಮಾಡಿ
ಆರಿಸಯ್ಯ ನನ್ನ ದಾಹವಾ
ಸುರಿದು ಒಂದು ಮಳೆ ಹನಿಯ..!!!!       

Wednesday 18 April 2012

ವರ್ಷದ ಮೊದಲಾ ಮಳೆ..!!!



ನಾನು ಮತ್ತು ಬೇಸಿಗೆಯ ಮಳೆಯ ಒಂದು ದಿನ .....


ನನಗೆ ಮಳೆಗಾಲ ಅಂದ್ರೆ ತುಂಬಾನೇ ಇಷ್ಟ.. ಇಟ್ ಇಸ್ ದಿ ಬೆಸ್ಟ್ ಸೆಜನ್.... ನನಗೆ ಮಳೆಲಿ ತೊಯೋದು ಅಂದ್ರೆ ಇಷ್ಟ, ನೆಣೆಯೋದು ಇಷ್ಟ, ಮಳೆಲಿ ಬೈಕ್ ಓದ್ಸೋದಿಷ್ಟ.....

Bangalore ಸೆಖೆ ಅಂದ್ರೆ ಕೇಳೋ ಹಾಗಿಲ್ಲ... ವೀಪರಿತ...ಬಿಸಿ ರೋಡು, ಬಿಸಿ ಗಾಲಿ, ಈ ಟ್ರಾಫಿಕ್, ಸಾಕಪ್ಪ ಸಾಕು.. ಮಳೆ ಬಂದ್ರೆ ಸಾಕು ಅಂದ್ಕೋತಿದ್ದೆ, ನಿನ್ನೆ ಮಧ್ಯಾನದ ಮೇಲೆ ವಾತಾವರಣ ಬದಲಾಯ್ತು... ಮೋಡ ಕವಿದು ತಣ್ಣಗೆ ಗಾಳಿ ಬಿಸಳರಂಬಿತು. ಆಹಾ ಏನ್ ಮಜಾ ಅಂತಿರ.. ಮಳೆ ಬರೋಕ್ ಶುರುವಾಯ್ತು.. ನಾನು ಕೆಲಸ ಮಾಡೋ ಬಿಲ್ಡಿಂಗಿನ ೧೦ ನೆ ಮಹಡಿಯಿಂದ ನೋಡಿದ್ರೆ ಇಡಿ Bangalore ಸ್ನಾನ ಮಾಡೋ ಹಾಗೆ. ಫ್ರೀಯಾಗಿ ಸ್ನಾನ ಮಾಡಿಸ್ದ್ರೆ ಯಾರದ್ರು ಬೇಡ ಅಂತಾರೆ ಇ ಕಾಲದಲ್ಲಿ..
ಮುಖದ ಮೇಲೆ ಆ  ಚಿಕ್ಕ ಚಿಕ್ಕ ಹನಿಗಳು, ಆ ಮಣ್ಣಿನ ವಾಸನೆ, ತಣ್ಣನೆ ಗಾಳಿ... ಹಾಗೆ ಮೈಮರತೆ ಒಂದು ಕ್ಷಣ....  ಮಳೆನು ಒಂಥರಾ ಆಟ ಅಡತ್ತೆ... ಇವತ್ತಿಗೆ ಇಷ್ಟ ಸಾಕು, ಮತ್ತೆ ಕಾಯ್ತಾ ಇರಿ ಅಂತ ಬೈ ಬೈ ಹೇಳ್ತು....

                                         

ನಾನು ಮತ್ತೆ ಸಂಧ್ಯಾ...

ಏಪ್ರಿಲ್ 18 ಕ್ಕೆ ಮದುವೆಯಾಗಿ ಐದು ವರ್ಷಗಳು... ನಾನು ಮತ್ತೆ ಸಂಧ್ಯಾ ಜೊತೆ ಬದುಕಲು ಶುರು ಮಾಡಿ.. ಇದನ್ನ ಸಂತೋಷದಿಂದ ಹೇಳ್ಕೊಳ್ಳ ಧುಕ್ಕದಿಂದ ಹೇಳ್ಕೊಲ್ಲಾ? ಹ ಹ ಹ ಹ...

ನಾನು ಮೊದಲ ಬರಿ ಅವಳನ್ನು ನೋಡಿದ್ದು ನನ್ನ ಮೊದಲ ನೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ.. ಮೊದಲಿಗೆ ಪರಿಚಯ, ಸ್ನೇಹ ಆಮೇಲೆ ಪ್ರೇಮವಾಗಿ ಅದು ಕೊನೆಗೊಂಡಿದ್ದು ಮದುವೆಯಾಗಿ... 

We took more than 3 years to understand each other before we go married. It is strange feeling if i think about those days... Small small fights for nothing... Just no understanding i would say....

ನನ್ನ ಜೀವನದಲ್ಲಿ ಎಲ್ಲವು ಹಂತ ಹಂತವಾಗಿ ಆಗಿದೆ....ನೌ ಲೈಫ್ ಇಸ್ peacefull ಅನ್ನಿಸ್ತ ಇದೆ....ಐದು ವರ್ಷ ಹೇಗ್ ಹೊಇತು ಅಂತಾನೆ ಗೊತ್ತಿಲ್ಲ.. ನಿನ್ನೆ ಮೊನ್ನೆ ಮದುವೆ  ಆದ ಹಾಗಿದೆ.. ನಾನು ಯಾವಾಗಲು ಅಂತಿದ್ದೆ ನಂದು child marriage ಅಂತ..ನನ್ನ ಮದುವೆ ಅದಾಗ ನನಗೆ ೨೬ ವರ್ಷ... ಅದ್ರು ಲೈಫು ಪಾಠ ಕಲ್ಸತ್ರಿ... ಲಿಫುಗಿಂತ ಒಳ್ಳೆ ಟೀಚೆರಿಲ್ಲ ಬೇಡಿ....

ನಾನು ನಂಗೆ ಗೊತ್ತಿಲ್ಲ, ಪಾಪಾ ಸಂಧ್ಯಾ ನನ್ನ ಇನ್ನು ಅರ್ಥ ಮಾಡ್ಕೊಳ್ಳ ಪ್ರಯತ್ನ ಮಾಡ್ತಾ ಇದಾಳೆ... ಅವ್ಲ್ಲಿಗೆ ಒಂದು ಆಲ್ ದಿ ಬೆಸ್ಟ್ ಹೇಳ್ತಾ ಇದನ್ನ ಇಲ್ಲೇ ಮುಗಿಸ್ತೀನಿ.... ಮುಂದಿನ ದಿನಗಳಲ್ಲಿ ನನ್ನ ಮತ್ತೆ ಸಂಧ್ಯಾ ಬಗ್ಗೆ ಬರೀತೀನಿ...

ನನ್ನ ಮಡದಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ್ ಶುಭಾಶಯಗಳು....!!
                                              ಇಂತಿ ನಿಮ್ಮ ಪ್ರೀತಿಯ.... ಸುನೀಲ..


Monday 16 April 2012

ರಾಜಾ ವ್ಹಿಸ್ಕಿ ತಂದ ಅಪತ್ತು :-)

ಇದು ನನ್ನ ಗೆಳೆಯನ ಅನುಭವ.....

ಅದೊಂದು ದಿನ ನನ್ನ ಗೆಳೆಯ, ತನ್ನ ಕೆಲುವು ಎಂಜೀನೆರ್ ಸ್ನೇಹಿತರೊಂದಿಗೆ ಮೂಲಂಗಿ ಫಾಲ್ಸ್ ನತ್ತ ಬೈಕಲ್ಲಿ ಪ್ರಯಾಣ ನಡೆಸಿದರು... ಅದು ಬೇಸಿಗೆಯ ರಜಾ ದಿನಗಳು.... ಹಳಿಯಾಳದಿಂದ ೪೦ KM ದೂರದಲ್ಲಿ ದಟ್ಟ ಕಾಡಿನ ಮದ್ಯ ತಂಪಾದ ಪ್ರದೇಶ....

ಆಗ ತಾನೇ ಎಂಜೀನೆರಿಂಗ್ ಓದುವ ಸಮಯದಲ್ಲಿ ಆಗಾಗ ಕುಡಿಯುವ (ಸಾರಾಯಿ) ಅಭ್ಯಾಸ ಆಗಿತ್ತು... ಹೋಗುವಾಗ ಒಂದು ಫುಲ್ bottle ರಾಜಾ ವ್ಹಿಸ್ಕಿ ತೆಗೆದುಕೊಂಡು ಪ್ರಯಾಣ ನಡೆಸಿದರು.. ಅವಾಗ ಅದಕ್ಕೆ ೧೦೦ ರೂಪಾಯಿ ಮಾತ್ರ....

ದಟ್ಟ ಕಾಡಿನ ಮದ್ಯ ಸುತ್ತಾಡುತ್ತ ಮೂಲಂಗಿ ಫಾಲ್ಸ್ ಗೆ ತಲುಪಿದ ನನ್ನ ಸ್ನೇಹಿತರು ನೀರಲ್ಲಿ ಆಟವಾಡಿ ಕುಡಿಯಲು ಕುಳಿತರು.... ಅನುಭವ ಕಡಿಮೆ ಅನ್ನಿ... ಇನ್ನು ಎಲೆ ಮಕ್ಕಳು :-).... ಅದೊಂಥರ ಒಳ್ಳೆ ಮಜಾ ನನ್ನ ಮಕ್ಕಳಿಗೆ.... ಜಿದ್ದಿಗೆ ಬಿದ್ದು ನನ್ನ ಸ್ನೇಹಿತ ಎರಡನೇ ಪೆಗ್ಗನ್ನು ನೀರಿಲ್ಲದೆ ಕುಡಿದು ಬಿಟ್ಟ.... ಎರಡೇ ನಿಮಿಷ...ಸ್ವರ್ಗಕ್ಕೆ ಮೂರೇ ಗೇಣು.... ನೆಲದ ಮೇಲೆ ಬಿದ್ದಿದ್ದ.....ನಾಲ್ಕು ಗಂಟೆಗಳ ಕಾಲ ಆಳವಾದ ನಿದ್ರೆ....

ಸಾಯಂಕಾಲ ಎಲ್ಲ ಸ್ನೇಹಿತರು ಸೇರಿ ಅವನನ್ನು ಕಾಳಿ ನದಿಯಲ್ಲಿ ಸ್ನಾನ ಮಾಡಿಸೋ contractu ಪಡೆದು ಕಾರ್ಯಕ್ಕೆ  ನಿರತರಾದರು... ೨ ಗಂಟೆಯ ಸತತ ಪ್ರಯತ್ನದಿದಂದ ಕೊನೆಗೂ ಸ್ವಲ್ಪ ಎಚ್ಚರವಾಯ್ತು.... ಹಾಗೋ ಹೀಗೋ ಎಲ್ಲರು ಮನೆಗೆ ವಾಪಸ್ಸ್ ಅಗೋ ಪ್ರಯತ್ನಕ್ಕೆ ಕೈ ಹಾಕಿದರೂ....

ನನ್ನ ಗೆಳೆಯನಿಗಿನ್ನು ಪೂರ್ತಿ ಜ್ಞಾನ ಬಂದಿರಲಿಲ್ಲ....ಇನ್ನೊಬ್ಬ ಗೆಳೆಯ ಒಂದು ಕೈಯಿಂದ ಬೈಕನ್ನು ಓಡಿಸುತ್ತಾ ಇನ್ನೊಂದು ಕೈಯಿಂಗ್ ಅವನನ್ನು ಹಿಡಿದುಕೊಂಡು ಹಳಿಯಾಲಕ್ಕೆ ಬಂದು ತಲುಪಿದರು.. ಆದರೆ ಮನೆಗೆ ಹೋಗೋ ಸಾಹಸ ಇರಲಿಲ್ಲ ನನ್ನ ಗೆಳೆಯನಿಗೆ. ಅಲ್ಲೇ ಪಕ್ಕದಲ್ಲಿದ್ದ ಪಾರ್ಕಲ್ಲಿ ಅವನನ್ನು ಬಿಟ್ಟು ನನ್ನ ಇನ್ನೊಬ್ಬ ಗೆಳೆಯ ಮನಗೆ ಹೋಗಿ ಮುಖ ತೋರಿಸಿ ಬರುತ್ತೇನ.. ನೀನು ಇಲ್ಲೇ ಇರು ಅಂದ....

ಪಾರ್ಕಲ್ಲಿ ಕುಳಿತಿದ್ದ ಸ್ನೇಹಿತ ಕುಲಿತುಕೊಲ್ಲಳರದೇ, ಅಲ್ಲೇ ಪಕ್ಕದಲ್ಲಿ ಸಪ್ಪೋರಗಿರೋ ಜಾಗ ನೋಡಿ ಕಣ್ಣು ಮುಚ್ಚಿಕೊಂಡು ಹಾಯಾಗಿ ಮಲಗಿದ....

 ಇನ್ನೊಬ್ಬ ಸ್ನೇಹಿತ ಅರ್ಧ ಘಂಟೆಯ ನಂತರ ಪಾರ್ಕಿಗೆ ಬಂದ.. ಅಲ್ಲಿ ಅವನಿಲ್ಲ.... ಎಲ್ಲ ಕಡೆ ಕೂಗಿದ.... ಎಲ್ಲೂ ಸಿಗಲಿಲ್ಲ ನನ್ನ ಸ್ನೇಹಿತ.. ಅತ್ತ ಕಡೆ ಅವನ ಮನೆಗೂ ಹೋಗಿ ಕೇಳೋ ಹಾಗಿಲ್ಲ.... ಅವನು ನನ್ನ ಸ್ನೇಹಿತನ ತಮ್ಮನಿಗೆ ನಿಮ್ಮ ಅಣ್ಣ ಬಂದ ಮೇಲೆ ಕಾಲ್ ಮಾಡಲು ತಿಳಿಸು ಅಂತ ಹೇಳಿ ಮನೆಗೆ ಹೋಗಿ ಊಟ ಮಾಡಿ ಮಲ್ಕೊಂಡ.....

ರಾತ್ರಿ ಹನ್ನೆರಡು ಘಂಟೆಯ ಸಮಯ, ನನ್ನ ಗೆಳೆಯನಿಗೆ ಕುಡಿದ ಅಮಲಿನಿಂದ ಹೊರ ಬರಲು ಅವಕಾಶ ಸಿಕ್ಕಿತು... ನೋಡಿದರೆ ಎಲ್ಲ ಕಡೆ ನಕ್ಷತ್ರ... ಕನಸೇನೋ ಅಂದುಕೊಂಡ.... ಆದರೆ ಅದು ವಾಸ್ತವ ಅನ್ನುವುದು ತಿಳಿದುಕೊಳ್ಳಲು ಹೆಚ್ಹು ಸಮಯ ಬೇಕಿರಲಿಲ್ಲ್ಲ.... ಎದೆ ಬಡಿತ ಹೆಚ್ಚಿತು... ಅವನು ಮಲಗಿದ್ದ ಜಾಗಒಂದು ಕಾಲದಲ್ಲಿ ಸ್ಮಶಾನ.... ಅಲ್ಲಿಂದ ಮನೆಯ ಕಡೆ ಒಡಲು ಶುರು ಮಾಡಿದ....ಒಂದೇ ವೇಗದಲ್ಲಿ ಮನೆ ತಲುಪಿದ... ಅದು ಅವನ ಉಳಿವಿಗಾಗಿ ಹೋರಾಟ.. ಅಂದೇ ಅಂದುಕೊಂಡ ಯಾವ ಜಿದ್ದಿಗು ಬಿದ್ದು ಇಂಥ ಕೆಲಸ ಮತ್ತೆ ಮಾಡಲ್ಲ....

               ಇವತ್ತು ಕೂಡ ಅವನಿಗೆ ಅ ಅನುಭವ ಖುಷಿ ಕೊಡುತ್ತೆ.....  ಮೊನ್ನೆ ವ್ಹಿಸ್ಕಿ ಜೊತೆ ಮತ್ತೆ ಮೆಲುಕು ಹಾಕಿದ ನೆನಪು ಹೊಟ್ಟೆ ಹುಣ್ಣು ಅಗುವಷ್ಟೇ ನಗು ತಂದಿತ್ತು......
                                                      ರಾಜಾ ವ್ಹಿಸ್ಕಿ ತಂದ ಅಪತ್ತು .. ಅದರ ಗಮ್ಮತ್ತೆ ಗಮ್ಮತ್ತು....

ಈಶ್ವರ ತತ್ವ!: ಕುರುಡು ಪ್ರೀತಿ !

ಈಶ್ವರ ತತ್ವ!: ಕುರುಡು ಪ್ರೀತಿ !: ನಾ ಕಣ್ಣು ಮುಚ್ಚಿದರೆ ಅವಳು , ಕಣ್ಣು ಬಿಟ್ಟರೆ ಅವಳು , ಆನಂದ ಭಾಷ್ಪವೇ ಅವಳು , ಕಣ್ಣೀರೂ ಅವಳೇ ... ನನ್ನ ಕಣ್ಣುಗಳು ಅವಳೇ ಆಗಿದ್ದಾಳೆ . ಒಹ್ , ಅವಳೆಂದರೆ ಕತ್ತಲಿರಬ...